Language | Kannada |
---|---|
Group | 31342 |
eBook – ಹಿಂದೂ ರಾಷ್ಟ್ರ : ಆಕ್ಷೇಪ ಮತ್ತು ಖಂಡನೆ
₹59
Also available in: Marathi , Hindi
ಇತ್ತೀಚೆಗೆ ‘ಹಿಂದೂ ರಾಷ್ಟ್ರ’ ಎಂಬ ಶಬ್ದವನ್ನು ‘ಸೆಕ್ಯುಲರ್ ಭಾರತ’ದಲ್ಲಿ ಆಕ್ಷೇಪಾರ್ಹವೆಂದು ಪರಿಗಣಿಸಲಾಗುತ್ತಿದೆ. ಕೆಲವು ಜನರಂತೂ ‘ಹಿಂದೂ’ ಶಬ್ದವನ್ನೇ ಮುಖ್ಯವಾಗಿ ಆಕ್ಷೇಪಿಸುತ್ತಾರೆ. ‘ಹಿಂದೂ ರಾಷ್ಟ್ರ’ದ ಕಲ್ಪನೆಯು ಅಸಾಂವಿಧಾನಿಕವಾಗಿದೆ’ ಎಂದು ‘ಸೆಕ್ಯುಲರ್’ ವಿಚಾರವಂತರ ಆಕ್ಷೇಪವಾಗಿದೆ. ಸಾಮಾಜಿಕ ಸೌಹಾರ್ದದ ಹರಟೆ ಹೊಡೆಯುವವರಿಗೆ ‘ಹಿಂದೂ ರಾಷ್ಟ್ರ ಸಂಕುಚಿತ ಅಥವಾ ಕಟ್ಟರ್ಪಂಥಿ’ ಎಂದೆನಿಸುತ್ತದೆ. ಅಹಿಂದೂ ಪಂಥೀಯರಿಗೆ ‘ತಮ್ಮ ಪ್ರಗತಿಯಲ್ಲಿ ‘ಹಿಂದೂ ರಾಷ್ಟ್ರ’ ಅಡ್ಡಿಯಾಗಬಹುದು’ ಎಂದು ಅನಿಸುತ್ತದೆ. ಈ ಆಕ್ಷೇಪಗಳು ಪ್ರಾತಿನಿಧಿಕವಾಗಿದ್ದರೂ, ಇಂತಹ ಅನೇಕ ಆಕ್ಷೇಪಗಳು ‘ಹಿಂದೂ ರಾಷ್ಟ್ರ’ ಶಬ್ದದ ಸುತ್ತಮುತ್ತಲೂ ಇರುತ್ತವೆ. ಈ ಆಕ್ಷೇಪಗಳ ವಾಸ್ತವಿಕತೆಯೇನು ? ಭಾರತವು ಸ್ವಯಂಭೂ ‘ಹಿಂದೂ ರಾಷ್ಟ್ರ’ವೇ ? ಮತ್ತು ‘ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡುವವರ ಮೂಲಭೂತ ವಿಚಾರಗಳೇನು’ ಎಂಬ ಪ್ರಶ್ನೆಗಳ ಉತ್ತರಗಳನ್ನು ಈ ಗ್ರಂಥ ನೀಡಲಿದೆ.
ಅನಾದಿಕಾಲದಿಂದಲೂ ‘ಹಿಂದೂ ರಾಷ್ಟ್ರ’ವು ಭಾರತದ ಹೆಗ್ಗುರುತಾಗಿತ್ತು. ಇಸ್ಲಾಮಿ ಮತ್ತು ಬ್ರಿಟೀಷರ ಆಳ್ವಿಕೆಯಲ್ಲೂ ಹಿಂದೂ ರಾಜರು ಈ ಗುರುತನ್ನು ಶಾಶ್ವತವಾಗಿಟ್ಟಿದ್ದರು. ೧೯೪೭ ರ ವಿಭಜನೆಯ ನಂತರ ಸಂವಿಧಾನ ಸಭೆಯಲ್ಲಿ ಭಾರತದ ಈ ಗುರುತನ್ನು ಅಳಿಸುವ ವಿಫಲ ಪ್ರಯತ್ನವಾಯಿತು. ೧೯೭೬ ರಲ್ಲಿ ಮಾತ್ರ ಇಂದಿರಾ ಗಾಂಧಿಯವರು ಅಸಾಂವಿಧಾನಿಕ ಪದ್ಧತಿಯಿಂದ ಭಾರತೀಯ ಸಂವಿಧಾನದಲ್ಲಿ ‘ಸೆಕ್ಯುಲರ್’ ಶಬ್ದವನ್ನು ಹಾಕಿ ‘ಹಿಂದೂ ರಾಷ್ಟ್ರ’ ಎಂಬ ಭಾರತದ ಗುರುತನ್ನು ಕೊನೆಗಾಣಿಸಿದರು. ಇಂದು ಕೇವಲ ೪೨ ವರ್ಷಗಳಲ್ಲಿಯೇ ವಿದೇಶದ ‘ಸೆಕ್ಯುಲರ್’ವಾದವು ಗೌರವಕ್ಕೆ ಪಾತ್ರವಾಗಿದ್ದರೆ, ‘ಹಿಂದೂ ರಾಷ್ಟ್ರ’ ಮಾತ್ರ ಕೀಳು ದರ್ಜೆಯದ್ದಾಗಿದೆ ಎಂದು ನಿರ್ಧರಿಸಲಾಗುತ್ತಿದೆ. ಅದಕ್ಕೂ ಮುಂದೆ ಹೋಗಿ ಸದ್ಯ ‘ಹಿಂದೂ ರಾಷ್ಟ್ರ’ ಎಂದು ಉಚ್ಚರಿಸುವುದು ಸಹ ಕಾನೂನುಬಾಹಿರ ಎಂದು ನಿರ್ಧರಿಸುವ ದುಷ್ಪ್ರಯತ್ನ ನಡೆಯುತ್ತಿದೆ. ಈ ಸ್ಥಿತಿ ಹೀಗೆಯೇ ಮುಂದುವರೆದರೆ, ಭವಿಷ್ಯದಲ್ಲಿ ಭಾರತವು ‘ಅಹಿಂದೂ ರಾಷ್ಟ್ರ’ವಾಗುವ ಅಪಾಯವಿದೆ. ಇಂತಹ ಸಮಯದಲ್ಲಿ ‘ಹಿಂದೂ ರಾಷ್ಟ್ರ’ ಎಂಬ ವಿಷಯದ ಸಂದರ್ಭದ ಆಕ್ಷೇಪಗಳನ್ನು ಖಂಡಿಸುವುದು ಆವಶ್ಯಕವಾಗಿದೆ. ಆದ್ದರಿಂದಲೇ ಈ ಗ್ರಂಥ ಉಪಯುಕ್ತವಾಗಿದೆ.
Reviews
There are no reviews yet.