Kannada Granth
ಸನಾತನದ ಚೈತನ್ಯಮಯ ಗ್ರಂಥಸಂಪತ್ತಿನ ಮುಖ್ಯ ವೈಶಿಷ್ಟ್ಯಗಳು !
೧. ಅಧ್ಯಾತ್ಮದ ಬಗೆಗಿನ ವಿವಿಧ ಗ್ರಂಥಗಳಲ್ಲಿನ ಸುಮಾರು ಶೇ. ೩೦ ರಷ್ಟು ವಿಷಯವು ಆಧಾರ ಗ್ರಂಥದಲ್ಲಿನ ವಿಷಯಗಳಾಗಿವೆ, ಸುಮಾರು ಶೇ. ೨೦ ರಷ್ಟು ವಿಷಯವು ಸಾಧಕರಿಗೆ ಸೂಕ್ಷ್ಮದಲ್ಲಿ ದೊರೆತ ಈಶ್ವರೀ ಜ್ಞಾನವಾಗಿದೆ ಮತ್ತು ಶೇ. ೫೦ ರಷ್ಟು ವಿಷಯವು ಗ್ರಂಥದ ಸಂಕಲನಕಾರರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ ಗುರುಗಳ ಆಶೀರ್ವಾದದಿಂದ ಆಂತರ್ಯದಿಂದ ಹೊಳೆದ ವಿಷಯವಾಗಿದೆ.
೨. ಅಧ್ಯಾತ್ಮದಲ್ಲಿನ ಪ್ರತಿಯೊಂದರ ಬಗ್ಗೆ `ಏಕೆ ಮತ್ತು ಹೇಗೆ’ ಎಂಬ ಉತ್ತರಗಳು !
೩. ವಿಜ್ಞಾನಯುಗದ ವಾಚಕರಿಗೆ ಅರ್ಥವಾಗುವಂತಹ ಆಧುನಿಕ ವೈಜ್ಞಾನಿಕ ಭಾಷೆಯಲ್ಲಿನ (ಉದಾ. ಕೋಷ್ಟಕ, ಶೇಕಡಾವಾರು) ಜ್ಞಾನ !
೪. ಅಧ್ಯಾತ್ಮದಲ್ಲಿನ ವಿವಿಧ ವಿಷಯಗಳ ಸಂದರ್ಭದಲ್ಲಿ ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಿದ ಸಂಶೋಧನೆ, ಸೂಕ್ಷ್ಮಸ್ತರದಲ್ಲಿನ ಪ್ರಕ್ರಿಯೆಯನ್ನು ತೋರಿಸುವ ಚಿತ್ರಗಳು ಮತ್ತು ಬರವಣಿಗೆಗಳು !
೫. ಸಾಧನೆಯ ಬಗ್ಗೆ ತಾತ್ತ್ವಿಕ ವಿವೇಚನೆಯಷ್ಟೇ ಅಲ್ಲದೆ ಸಾಧನೆಯನ್ನು ಕೃತಿಯಲ್ಲಿ ತರುವ ಬಗ್ಗೆ ಪ್ರಾಯೋಗಿಕ ಮಾರ್ಗದರ್ಶನ !
೬. ಶೀಘ್ರ ಈಶ್ವರಪ್ರಾಪ್ತಿಗಾಗಿ ಯೋಗ್ಯ ಸಾಧನೆಯ ಬೋಧನೆ !
೭. ಅಧ್ಯಾತ್ಮವನ್ನು ತಿಳಿಸಲು ವಿವಿಧ ಸಾಧನಾಮಾರ್ಗಗಳ ತುಲನಾತ್ಮಕ ವಿವೇಚನೆ !
ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ
ಅಖಿಲ ಮಾನವಜಾತಿಯ ಉದ್ಧಾರ ಮಾಡುವ ಸನಾತನದ ಗ್ರಂಥಸಂಪತ್ತು !
`ಅಧ್ಯಾತ್ಮವು ಚಿರಂತನವಾಗಿ ಉಳಿಯುವ ಏಕೈಕ ಶಾಸ್ತ್ರವಾಗಿದೆ’ ಎಂಬ ಸಿದ್ಧಾಂತವನ್ನು ಇಂದಿನ ವಿಜ್ಞಾನಯುಗದಲ್ಲೂ ನಿರ್ಭಯವಾಗಿ ಮತ್ತು ನಿರ್ದಿಷ್ಟವಾಗಿ ಹೇಳುವ ಲೇಖನ !
ಬುದ್ಧಿಪ್ರಾಮಾಣ್ಯವಾದಿಗಳ ಬುದ್ಧಿಯ ಮೇಲಿನ ಅಹಂಕಾರದ ಆವರಣವನ್ನು ದೂರ ಮಾಡಿ ಅವರನ್ನು ಚಿರಂತನವಾಗಿರುವ ಆನಂದದೆಡೆಗೆ ಕರೆದೊಯ್ಯುವ ವಿವೇಚನೆ !
ಅಧ್ಯಾತ್ಮಶಾಸ್ತ್ರದ ಅಧ್ಯಯನದಿಂದ ಪ್ರತಿಯೊಬ್ಬ ವ್ಯಕ್ತಿಯ ಐಹಿಕ ಮತ್ತು ಪಾರಮಾರ್ಥಿಕ ಪ್ರಗತಿಯಾಗಲು ಹಾಗೂ ಸಂಪೂರ್ಣ ವಿಶ್ವದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸುವುದಕ್ಕಾಗಿ ಮಾರ್ಗದರ್ಶನ !
ಗ್ರಂಥದಲ್ಲಿನ ಸತ್ತ್ವಗುಣೀ ವಿಚಾರಗಳಿಂದ ವಾಯುಮಂಡಲದಲ್ಲಿ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜಯುಕ್ತ ವಿಚಾರಗಳ ಪ್ರಕ್ಷೇಪಣೆ !
ಈಶ್ವರೀ ತತ್ತ್ವದ ರೂಪದಲ್ಲಿರುವ ಶಬ್ದಗಳನ್ನು ಪ್ರಮಾಣವೆಂದು ಪರಿಗಣಿಸಿ ಗ್ರಂಥಗಳನ್ನು ಬರೆದಿರುವುದರಿಂದ ಒಂದು ರೀತಿಯಲ್ಲಿ ಈಶ್ವರನ ಸಾಕ್ಷಿಯಲ್ಲಿ ಗ್ರಂಥಗಳ ನಿರ್ಮಿತಿ !
ಜ್ಞಾನದಲ್ಲಿನ ಈಶ್ವರನ ಚೈತನ್ಯ ಹಾಗೂ ಆನಂದ ಮತ್ತು ಶಾಂತಿಯ ಅನುಭೂತಿಗಳನ್ನು ನೀಡುವ ಸಾಹಿತ್ಯ !
ವಾಚಕರೇ, `ಸನಾತನದ ಪ್ರತಿಯೊಂದು ಗ್ರಂಥವನ್ನು ಭಾವಪೂರ್ಣ ಪ್ರಾರ್ಥನೆಯ ಆಧಾರದ ಮೇಲೆ ಓದಿರಿ, ಇದರಿಂದ ಗ್ರಂಥದಲ್ಲಿನ ಮೂಲ ಶಾಸ್ತ್ರವು ಸುಲಭವಾಗಿ ಅರ್ಥವಾಗುತ್ತದೆ ಮತ್ತು ಸನಾತನದ ಯಾವುದೇ ಗ್ರಂಥವು ಕಠಿಣವೆನಿಸದೆ ನಿಮ್ಮ ಅಂತರಂಗದಲ್ಲಿನ ದೈವತ್ವವನ್ನು ಜಾಗೃತಗೊಳಿಸುತ್ತದೆ !
– ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ
ಪೂ. ರಮಾನಂದ ಗೌಡ
ಈಶ್ವರನ ಸಂಕಲ್ಪದಿಂದ ನಿರ್ಮಿತವಾದ ಮತ್ತು ಮನುಕುಲದ ಉದ್ಧಾರ ಮಾಡುವ ಸನಾತನದ ಗ್ರಂಥಗಳು !
೧. `ಜ್ಞಾನ ನೀಡುವವರು `ಗುರು’ ! ಸನಾತನದ ಗ್ರಂಥವನ್ನು ಓದಿದ ನಂತರ ನನಗೆ `ಗ್ರಂಥವೇ ಗುರುವಾಗಿದೆ !’ ಎಂಬ ವಚನದ ಅನುಭವವಾಯಿತು.
೨. `ಜ್ಞಾನಗುರು’ಗಳಾಗಿರುವ ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡಿರುವ ಗ್ರಂಥಗಳು ಕೂಡ ಜ್ಞಾನದ ಭಂಡಾರವಾಗಿವೆ !
೩. ಶ್ರೀಮದ್ಭಗವದ್ಗೀತೆ, ಮಹಾಭಾರತದಂತಹ ಗ್ರಂಥಗಳು ಈಶ್ವರನ ವಾಣಿಯಿಂದ ಸಾಕಾರಗೊಂಡಿವೆ; ಆದುದರಿಂದ ಅವು ಚೈತನ್ಯದಾಯಕವಾಗಿವೆ. ಸನಾತನದ ಗ್ರಂಥಗಳೂ ಈಶ್ವರನ ಸಂಕಲ್ಪದಿಂದ ನಿರ್ಮಿತವಾಗಿವೆ. `ಕಲಿಯುಗದ ವೇದ’ಗಳಾಗಿರುವ ಈ ಗ್ರಂಥಗಳು ಚೈತನ್ಯದ ಸ್ರೋತಗಳಾಗಿವೆ.
೪. ಸನಾತನದ ಚೈತನ್ಯಮಯ ಗ್ರಂಥಸಂಪತ್ತಿನಿಂದ ವಾಸ್ತುವಿನಲ್ಲಿ ಸಾತ್ತ್ವಿಕತೆಯು ನಿರ್ಮಾಣವಾಗಿ ವಾಸ್ತುವು ಶುದ್ಧವಾಗುತ್ತದೆ.
೫. ಸನಾತನದ ಗ್ರಂಥಗಳಲ್ಲಿರುವ ಸಾಧನೆಯ ಬಗೆಗಿನ ಮಾರ್ಗದರ್ಶನವನ್ನು ಕೃತಿಯಲ್ಲಿ ತಂದು ವಾಚಕರು ಕ್ರಮೇಣ `ಸಾಧಕ’, `ಒಳ್ಳೆಯ ಸಾಧಕ’, `ಶಿಷ್ಯ’, ಮತ್ತು `ಸಂತ’ರಾಗಬಲ್ಲರು. ಹೀಗೆ ಸನಾತನದ ಗ್ರಂಥಗಳು ಮಾನವನ ಉದ್ಧಾರ ಮಾಡುವಂತಹದ್ದಾಗಿವೆ.’
– ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ, ಕರ್ನಾಟಕ. (೨.೯.೨೦೨೧)
ಸನಾತನದ ಗ್ರಂಥಕಾರ್ಯದಲ್ಲಿ ಪಾಲ್ಗೊಂಡು ಸಮಷ್ಟಿ ಸಾಧನೆ ಮಾಡಿ !
- ಮರಾಠಿ ಭಾಷೆಯಲ್ಲಿನ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡುವುದು
- ಕನ್ನಡ ಭಾಷೆಯಲ್ಲಿನ ಗ್ರಂಥಗಳನ್ನು ಇತರ ಭಾರತೀಯ ಭಾಷೆಗಳಿಗೆ ಉದಾ. ತಮಿಳು, ತೆಲುಗು, ಮಲಯಾಳಮ್ ಇತ್ಯಾದಿ. ಅನುವಾದ ಮಾಡುವುದು
- ಗ್ರಂಥದ ರಚನೆಯನ್ನು `ಇನ್ಡಿಸೈನ್’ ಎಂಬ ಗಣಕ ತಂತ್ರಾಂಶದಲ್ಲಿ ಮಾಡುವುದು
ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಳ್ಳಲು ಸಂಪರ್ಕಿಸಿ !
ಸಂಪರ್ಕ ಸಂಖ್ಯೆ : ೯೩೪೨೪ ೩೫೬೧೭
ವಿ-ಅಂಚೆ : [email protected]