Weight | 0.100 kg |
---|---|
Language | Kannada |
No of Pages | 72 |
ISBN | 978-93-92952-64-7 |
Compilers | ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ |
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡಿದ ಗುರುಸೇವೆ ಮತ್ತು ಅವರ ಶಿಷ್ಯತ್ವ
₹75
- ‘ಶಿಷ್ಯ ಡಾ. ಜಯಂತ ಆಠವಲೆಯವರ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರು (ಪ.ಪೂ. ಬಾಬಾ) ಯಾವಾಗಲೂ, ‘ಸಂತರನ್ನು ದೋಚಲು (ಸಂತರಿಂದ ಜ್ಞಾನವನ್ನು ಪಡೆಯಲು) ಎರಡು ವಿಷಯಗಳಿವೆ – ನಾಮ ಮತ್ತು ಸೇವೆ ! ಎಂದು ಹೇಳುತ್ತಿದ್ದರು. ಡಾ. ಆಠವಲೆಯವರು ಗುರುಗಳಿಂದ ಈ ಎರಡು ವಿಷಯಗಳ ಉಪಯೋಗವನ್ನು ಯಥೇಚ್ಛವಾಗಿ ಮಾಡಿಕೊಂಡರು; ಏಕೆಂದರೆ ಗುರುಗಳ ಸಹವಾಸದಲ್ಲಿ ಅವರ ನಾಮಜಪ ಅಖಂಡವಾಗಿ ನಡೆಯುತ್ತಿತ್ತು ಮತ್ತು ಅವರು ಗುರುಚರಣಗಳಲ್ಲಿ ತನು-ಮನ ಮತ್ತು ಧನವನ್ನು ಅರ್ಪಿಸಿ ಪರಿಪೂರ್ಣ ಸೇವೆಯನ್ನು ಮಾಡಿದರು; ಆದ್ದರಿಂದಲೇ ಗುರುಗಳೂ ಅವರಿಗೆ ‘ಡಾಕ್ಟರ್, ನಾನು ನಿಮಗೆ ಜ್ಞಾನ, ಭಕ್ತಿ ಮತ್ತು ವೈರಾಗ್ಯವನ್ನು ನೀಡಿದೆ ! ಎಂದು ಹೇಳಿದರು.
- ಶಿಷ್ಯನು ಯಾವಾಗ ತನ್ನ ತನು-ಮನ-ಧನವನ್ನು ಗುರುಗಳಿಗೆ ಅರ್ಪಿಸುತ್ತಾನೆಯೋ, ಆಗ ಅವನ ಒಡೆತನದ ಪ್ರತಿಯೊಂದು ವಸ್ತು, ಅಷ್ಟೇ ಅಲ್ಲ, ಅವನ ಮನಸ್ಸಿನಲ್ಲಿನ ಪ್ರತಿಯೊಂದು ವಿಚಾರವೂ ಗುರುಗಳದ್ದಾಗಿರುತ್ತದೆ. ಡಾಕ್ಟರರ ಸ್ಥಿತಿಯೂ ಹೀಗೇ ಆಗಿರುತ್ತಿತ್ತು. ಅವರಿಗೆ ತಮ್ಮ ಮನಸ್ಸಿನ ಪ್ರತಿಯೊಂದು ವಿಚಾರವೂ ಪ.ಪೂ. ಬಾಬಾರವರದ್ದೇ ಆಗಿರುವುದರ ಅನುಭವ ಬರುತ್ತಿತ್ತು. ಇದರಿಂದ ‘ಡಾಕ್ಟರರ ಶಿಷ್ಯತ್ವ ಎಷ್ಟು ಉಚ್ಚ ಕೋಟಿಯದ್ದಾಗಿತ್ತು ಎಂಬುದು ಗಮನಕ್ಕೆ ಬರುತ್ತದೆ. ಅವರ ಶಿಷ್ಯತ್ವದ ವಿವಿಧ ಮಾದರಿಯನ್ನು ತೋರಿಸುವ ಈ ಗ್ರಂಥವು ಸಾಧಕರಿಗೆ ‘ಆದರ್ಶ ಶಿಷ್ಯರಾಗಲು ಅನರ್ಘ್ಯವಾಗಿದೆ.
Reviews
There are no reviews yet.