ಸೇವೆಯಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಏನು ಮಾಡಬೇಕು?

20

ಮಾನವನ ಮನಸ್ಸು ಸ್ವಭಾವತಃ ಅಸ್ಥಿರವಾಗಿರುತ್ತದೆ. ಒಂದೇ ಕಡೆ ಕುಳಿತು ಗಂಟೆಗಟ್ಟಲೆ ನಾಮಜಪ ಮಾಡುವುದು, ಧ್ಯಾನಧಾರಣೆ ಇತ್ಯಾದಿಗಳಂತಹ ಸಾಧನೆಯ ಮಾರ್ಗಗಳಿಂದ ಅದನ್ನು ಒಂದು ಕಡೆ ಸ್ಥಿರವಾಗಿಸಬೇಕಾಗುತ್ತದೆ. ಆದರೆ ಇಂತಹ ಸಾಧನೆಯನ್ನು ಮಾಡಲು ಸಾಧಾರಣ ಮನಸ್ಸಿಗೆ ಕಷ್ಟವಾಗುತ್ತದೆ. ಇದಕ್ಕೆ ಬದಲಾಗಿ ‘ಸತ್ಸೇವೆ (ಸೇವೆ) ಈ ಸಾಧನೆಯ ಮಾರ್ಗದಲ್ಲಿ ಶರೀರ ಮತ್ತು ಬುದ್ಧಿ ಇವುಗಳಿಂದಾಗುವ ವಿವಿಧ ಕಾರ್ಯಗಳಿಗೆ (ಉದಾ. ಅಧ್ಯಾತ್ಮ ಪ್ರಸಾರ ಮಾಡುವುದು, ಗ್ರಂಥಗಳಿಗಾಗಿ ಲೇಖನ ಬರೆಯುವುದು) ಸಾಧಕನ ಮನಸ್ಸು ಹೆಚ್ಚು ಒಗ್ಗಿಕೊಳ್ಳುತ್ತದೆ. ಸೇವೆಯ ಮಾಧ್ಯಮದಿಂದ ಸಾಧಕನ ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳು ಈಶ್ವರನ ಚರಣಗಳಲ್ಲಿ ಬೇಗನೆ ಲಯವಾಗುವುದರಿಂದ ಇದರ ಮಾಧ್ಯಮದಿಂದ ಸಾಧಕನ ಆಧ್ಯಾತ್ಮಿಕ ಉನ್ನತಿಯೂ ಬೇಗನೆ ಆಗುತ್ತದೆ. ಸೇವೆಯೆಂದರೆ ಸಾಧಕನಿಗೆ ಸಾಧನೆಗಾಗಿ ಇರುವ ಪ್ರಾಣವಾಯು!
Index and/or Sample Pages

Contact : [email protected]
Mobile : +91 9342599299