ಶ್ರೀರಾಮರಕ್ಷಾಸ್ತೋತ್ರ, ಮಾರುತಿಸ್ತೋತ್ರ ಮತ್ತು ಹನುಮಾನ ಚಾಲೀಸಾ (ಅರ್ಥಸಹಿತ)

20

ದೇವತೆಗಳ ಸ್ತುತಿಯನ್ನು ಯಾವುದರಲ್ಲಿ ಮಾಡಲಾಗುತ್ತದೆಯೋ ಅದುವೇ ಸ್ತೋತ್ರ !

ನಮ್ಮ ಮನೆಮನೆಗಳಲ್ಲಿ ಸಾಯಂಕಾಲ ದೇವರ ಎದುರು ದೀಪ ಹಚ್ಚುವಾಗ `ಶುಭಂ ಕರೋತಿ’ಯಂತಹ ಶ್ಲೋಕಗಳೊಂದಿಗೆ ಶ್ರೀರಾಮರಕ್ಷಾಸ್ತೋತ್ರ, ಮಾರುತಿಸ್ತೋತ್ರ ಮತ್ತು ಹನುಮಾನಚಾಲೀಸಾಗಳನ್ನು ಹೇಳುವ ಪರಿಪಾಠವಿದೆ.

ಈ ಕಿರುಗ್ರಂಥದಲ್ಲಿ ಈ ಮೂರೂ ಸ್ತೋತ್ರಗಳನ್ನು ಕೊಡಲಾಗಿದೆ. ಹಾಗೆಯೇ ಮಹತ್ವದ ಕೆಲವು ಅಧ್ಯಾತ್ಮಶಾಸ್ತ್ರೀಯ ಸಿದ್ಧಾಂತಗಳನ್ನೂ ಕೊಡಲಾಗಿದೆ. ಗ್ರಂಥದ ಆರಂಭದಲ್ಲಿ ಶ್ರೀರಾಮ, ಮಾರುತಿ, ಸ್ತೋತ್ರಗಳ ರಚನಾಕಾರರು, ಮಂತ್ರ, ಕೀಲಕ, ಸ್ತೋತ್ರ ಮತ್ತು ಕವಚಗಳಂತಹ ಉಪಯುಕ್ತ ಮಾಹಿತಿಯನ್ನೂ ಕೊಡಲಾಗಿದೆ.

ಸ್ತೋತ್ರಪಠಣ ಮಾಡುವವರ ಸುತ್ತಲೂ ರಕ್ಷಣಾಕವಚ ನಿರ್ಮಾಣವಾಗುತ್ತದೆ.ಸ್ತೋತ್ರ ರಚನೆಯ ಹಿಂದೆ ಅದರ ರಚನಾಕಾರರ ಸಂಕಲ್ಪವಿರುವುದರಿಂದ ಅದರ ಪಠಣದಿಂದ ಇಚ್ಚಾಪೂರ್ತಿ, ವೈಭವ, ಪಾಪನಾಶ ಇತ್ಯಾದಿ ಫಲಗಳು ಪ್ರಾಪ್ತವಾಗುತ್ತವೆ.

ಇದಕ್ಕಾಗಿ ಸ್ತೋತ್ರಗಳನ್ನು ಅವುಗಳ ಅರ್ಥವನ್ನು ಅರಿತು ಹೇಳಿ !

Index and/or Sample Pages

Contact : [email protected]
Mobile : +91 9342599299