ದಿ.ಸೌ ಸುಜಾತ ಕುಲಕರ್ಣಿಯವರ ಅಂತಿಮ ಅನಾರೋಗ್ಯ ಮತ್ತು ಮೃತ್ಯು

110

  • ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಅಂಬರನಾಥದ ಶ್ರೀ. ದೇವದತ್ತ ಕುಲಕರ್ಣಿ, ಅವರ ಪತ್ನಿ ಸೌ. ಸುಜಾತಾ ಕುಲಕರ್ಣಿ ಮತ್ತು ಅವರ ಮಗಳು ಕು. ತೃಪ್ತಿ ಇವರೆಲ್ಲರೂ ಕಳೆದ ಅನೇಕ ವರ್ಷಗಳಿಂದ ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದಾರೆ.
  • ಕಳೆದ ೧೦ ವರ್ಷಗಳಿಂದ ಅವರು ಮನೆಮಠ ಬಿಟ್ಟು ಸನಾತನದ ಗೋವಾದ ರಾಮನಾಥಿಯಲ್ಲಿರುವ ಆಶ್ರಮದಲ್ಲಿ ಬಂದು ವಾಸಿಸುತ್ತಿದ್ದಾರೆ. ಆದ್ದರಿಂದ ಅವರ ಸಂಬಂಧಿಕರೊಂದಿಗೆ ಅಷ್ಟೇನೂ ಸಂಬಂಧವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೌ. ಸುಜಾತಾ ಕುಲಕರ್ಣಿಯವರು ಏಪ್ರಿಲ್ ೨೦೧೯ ರಿಂದ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಅನಾರೋಗ್ಯದಲ್ಲಿಯೇ ೨೦.೪.೨೦೨೦ ರಂದು ಅವರು ಮೃತರಾದರು.
  • ಅದರಲ್ಲೂ ೨೨.೩.೨೦೨೦ ರಿಂದ ‘ಕೊರೋನಾ ಮಹಾಮಾರಿಯಿಂದ ದೇಶದೆಲ್ಲೆಡೆ ಸಂಚಾರಸಾರಿಗೆ ನಿರ್ಬಂಧವಿತ್ತು. ಒಟ್ಟಿನಲ್ಲಿ ಕುಲಕರ್ಣಿ ಕುಟುಂಬದವರಿಗೆ ಇದು ಆಪತ್ಕಾಲವೇ ಆಗಿತ್ತು.
  • ‘ಸೌ. ಕುಲಕರ್ಣಿಯವರ ಅಂತಿಮ ಗಂಭೀರ ಅನಾರೋಗ್ಯವನ್ನು ಕುಲಕರ್ಣಿ ಕುಟುಂಬದವರು ಮತ್ತು ನಂತರ ಸೌ. ಕುಲಕರ್ಣಿಯವರ ಮೃತ್ಯುವನ್ನು ಶ್ರೀ. ಕುಲಕರ್ಣಿ ಮತ್ತು ಅವರ ಒಬ್ಬಳೇ ಮಗಳು ಆಶ್ರಮದ ಸಾಧಕರ ಮತ್ತು ಸಾಧನೆಯ ಬಲದಲ್ಲಿ ಧೈರ್ಯದಿಂದ ಹೇಗೆ ಎದುರಿಸಿದರು ? ಎಂಬುದರ ಮಾಹಿತಿಯನ್ನು ಈ ಗ್ರಂಥದಲ್ಲಿ ಕೊಡಲಾಗಿದೆ.
Index and/or Sample Pages

Contact : [email protected]
Mobile : +91 9342599299